ಹುಬ್ಬಳ್ಳಿ-ಧಾರವಾಡದ ಪ್ರೈವೆಟ್ ಹ್ಯಾಂಗೌಟ್ ಸ್ಥಳಗಳು

ನಿಮ್ಮ "ಸ್ಪೆಷಲ್ ಫ್ರೆಂಡ್ಸ್" ಜೊತೆ ಖುಶಿಯಾಗಿ ಕೆಲವು ಗಂಟೆ ಕಳೆಯಲು ಸೂಕ್ತವಾದ ಶಾಂತ ಮತ್ತು ಖಾಸಗಿ ಸ್ಥಳಗಳು

ಬಾಸೊ, ಒಂದ್ ಕಲ್ಪನೆ ಮಾಡು ನೋಡೋಣ. ನಮ್ ಹಿಂದೆ ಕಣ್ಣು ಮಾಡೋ , ಜಾಸ್ತಿ ಪ್ರಶ್ನೆ ಕೇಳೋ, ಅಸೂಯೆ ಪಡೋವ್ರು ಇಲ್ಲದ ಒಂದ್ ಜಾಗ... ನಿಮ್ಮ "ಸ್ಪೆಷಲ್ ಫ್ರೆಂಡ್ಸ್" ಜೊತೆ ಖುಶಿಯಾಗಿ ಸಮಯ ಕಳೆಯೋಕೆ, ಮಾತಾಡೋಕೆ, ನಗೋಕೆ. ಆರಾಮದ ಆಟ್ಮಾಸ್ಫಿಯರ್ ಇರೋ ಸ್ಥಳ... ಅಂತಹಾ ಕೆಲವ್ ಜಾಗಗಳನ್ನ ನೋಡೋಣ ಬನ್ನಿ!

ಸಂಜೀವಿನಿ ಪಾರ್ಕ್ (ಸತ್ತೂರು)

ಸಂಜೀವಿನಿ ಪಾರ್ಕ್ (ಸತ್ತೂರು)

ಎಲ್ಲಿ?: ಸತ್ತೂರು areaಲಿ, ಹುಬ್ಬಳ್ಳಿ-ಧಾರವಾಡ ರಸ್ತೆ ಅಂಗೆ, ISKON ಮಂದಿರದ ಪಕ್ಕದ್ದಲಿ.

ಹೇಗೆ ಹೋಗೋದು?: ಬೈಕ್ನಲ್ಲಿ ಹೋಗಿ ಅಥವಾ ಹುಬ್ಬಳ್ಳಿ-ಧಾರವಾಡ ಬಸ್ ಕ್ಯಾಚ್ ಮಾಡಿ.

ಎಂಥ ಜಾಗ?: ಈ ಪಾರ್ಕ್ ನಿಜವೇ ನೆಮ್ಮದಿಯ ಜಾಗ. ನಗರದ ಗಲಾಟೆ ಇಲ್ಲ, ಹಾಗೆಯೇ ಫ್ಯಾಮಿಲಿ ಮತ್ತು ಚಿಕ್ಕಪ್ಪಗಳ ಕಣ್ಣು ಇಲ್ಲ! ಟಿಕೆಟ್ ತೆಗೊಂಡು ಒಳಗೆ ಹೋಗಿ. ಸಾಮಾನ್ಯವಾಗಿ ೬ ಗಂಟೆಗೆ ಮುಚ್ಚ್ತಾರೆ, ಆದ್ರೆ ೨೪/೭ ತೆರೆದಿರೋ ಬ್ಯಾಕ್ ಗೇಟ್ ಇದೆ (ಗೂಗಲ್ ಮ್ಯಾಪ್ನಲ್ಲಿ ನೋಡಿ). ಅಲ್ಲಿಂದ ಹೋಗಿ ರಾತ್ರಿ ಕೂಡಾ ಇರಿ. ಪಾರ್ಕ್ ಜೊತೆಗೆ ದೊಡ್ಡ ಕಾಡು ಪ್ರದೇಶ ಮತ್ತು ಒಂದು ಸಣ್ಣ ಗುಡ್ಡವೂ ಇದೆ. ಹಲವರಿಗೆ, ಅದರಲ್ಲೂ ಹೈ-ಕ್ಲಾಸ್ ಕಾಲೇಜು ಹುಡುಗರಿಗೆ, ಈ ಜಾಗದ ಬಗ್ಗೆ ತಿಳಿದೇ ಇರಲ್ಲ!

ಮಂಕಿ ಹಿಲ್ ಈಕೋ ಪಾರ್ಕ್

ಮಂಕಿ ಹಿಲ್ ಈಕೋ ಪಾರ್ಕ್

ಎಲ್ಲಿ?: ಸಂಜೀವಿನಿ ಪಾರ್ಕ್ನಿಂದ ಸ್ವಲ್ಪ ದೂರ, ಹುಬ್ಬಳ್ಳಿ-ಧಾರವಾಡ ಮೇನ್ ರೋಡ್ನಿಂದ ಸುಮಾರು 500 ಮೀಟರ್ ಒಳಗೆ.

ಎಂಥ ಜಾಗ?: ಇದು ಹೊಸ ಪಾರ್ಕು, ನಮ್ಮ ಅಪ್ಪ-ಅಜ್ಜಂದ್ರಿಗೆ ಗೊತ್ತಿಲ್ಲದ್ದು! ಸಂಜೀವಿನಿ ಪಾರ್ಕ್ನಂತೆಯೇ ಇದೆ, ಆದ್ರೆ ಇದು ಇನ್ನೂ ದೊಡ್ಡದು! ಒಟ್ಟು ೬-೭ ಎಕರೆ ಪ್ರದೇಶದ ರಿಸರ್ವ್ಡ್ ಫಾರೆಸ್ಟ್ ಅಂತೇ ಹೇಳೋಕೆ ಬರುತ್ತೆ. ಸೈಕ್ಲಿಂಗ್ ಕೂಡಾ ಮಾಡಬಹುದು. ಟಿಕೆಟ್ ಇದೆ. ಒಂಟಿಯಾಗಿ ಇರೋಕೆ ಬೇಕಾದ ಕಪಲ್ಸ್ ಗೆ ಪರ್ಫೆಕ್ಟ್ ಸ್ಪಾಟ್.

ನಿಮ್ಮ ಅಪಾರ್ಟ್ಮೆಂಟ್ ಟೆರೇಸ್ (ಮಾಳಿಗೆ)

ನಿಮ್ಮ ಅಪಾರ್ಟ್ಮೆಂಟ್ ಟೆರೇಸ್ (ಮಾಳಿಗೆ)

ಎಲ್ಲಿ?: ಹಾ ಹಾ ಹಾ... ನಿಮ್ಮ ಬ್ಲಾಕ್ನ ಮೇಲೆ!

ಎಂಥ ಜಾಗ?: ಹೆಚ್ಚು ದೂರ ಹೋಗೋ ಸ್ಥಿತಿ ಇಲ್ಲದಿದ್ರೆ, ಮನೇಲಿ ಇದ್ದುಕೊಂಡೇ ಪ್ರೈವಸಿ ಬೇಕಾದ್ರೆ, ನಿಮ್ಮ ಬಿಲ್ಡಿಂಗ್ನ ಟೆರೇಸೇ ನಿಮ್ಮದೇ ಖಾಸಗಿ ರೆಸಾರ್ಟ್! ಎತ್ತರದ ಮೇಲೆ ಇರೋದರಿಂದ ನಗರದ ಜನರಿಂದ ದೂರ ಮತ್ತು ನಿಮ್ಮ ಲವ್ರ ಜೊತೆ ಸೈಲೆಂಟ್ ಟೈಮ್ ಎನ್ಜಾಯ್ ಮಾಡ್ಲಿಕ್ಕೆ ಬರುತ್ತೆ. ಮದುವೆ ಆಗಲ್ಲಿಲ್ಲ ಅಂತ ಯಾವ ಟೆನ್ಷನ್ ಇಲ್ಲ!

ಕೆ.ಯು.ಡಿ. ಕ್ಯಾಂಪಸ್ (ಧಾರವಾಡ)

ಕೆ.ಯು.ಡಿ. ಕ್ಯಾಂಪಸ್ (ಧಾರವಾಡ)

ಎಲ್ಲಿ?: ಧಾರವಾಡದಲ್ಲಿ.

ಎಂಥ ಜಾಗ?: ಸುಂದರವಾದ ಸ್ಥಳ, ಚಲನಚಿತ್ರ ಚಿತ್ರೀಕರಣಕ್ಕೆ ಬಳಸಲಾಗುವ ಹಲವು ಸ್ಥಳಗಳಿವೆ..ಬಹಳಷ್ಟು ಜನರಿಗೆ ಅದು ಕ್ಯಾಂಪಸ್ ಅಥವಾ ಐಕಾನ್ ಅಲ್ಲ. ಅದು ಒಂದು ಭಾವನೆ. ದಿನದ ಹೊತ್ತು ಚೆನ್ನಾಗಿ ಟೈಮ್ ಪಾಸ್ ಮಾಡೋಕೆ ದೊಡ್ಡ ಪ್ರದೇಶ ಸಿಗತ್ತೆ.

ಕಾಲೇಜ್ ಕ್ಯಾಂಪಸ್ಗಳು

ಕಾಲೇಜ್ ಕ್ಯಾಂಪಸ್ಗಳು

ಎಲ್ಲಿ?: ಹುಬ್ಬಳ್ಳಿ-ಧಾರವಾಡದ ಎಲ್ಲಾ ಮುಖ್ಯ ಕಾಲೇಜುಗಳು.

ಎಂಥ ಜಾಗ?: ಕಾಲೇಜ್ ಕ್ಯಾಂಪಸ್ಗಳಲ್ಲಿ ಇಂಟ್ರೆಸ್ಟಿಂಗ್ ಆಗಿರೋದೇ ಒಂದೇ ಕಾರಣ – ಲವರ್ಸ್! ಯುನಿಫಾರ್ಮ್ ಇಲ್ಲದೆ, ಯಾವುದೇ ನಿರ್ಬಂಧ ಇಲ್ಲದೆ ಒಳಗೆ ಹೋಗಿ ಕೂತ್ಕೊಳಿಕ್ಕೆ ಬರುತ್ತೆ. ನಿಮ್ಮ ಪಾರ್ಟ್ನರ್ ಜೊತೆಗೆ ಇತರ "ಡೈರೆಕ್ಷನ್ಲೆಸ್" ಸ್ಟುಡೆಂಟ್ಸ್ ಮಧ್ಯೆ ಕೂತ್ಕೊಳಿ. SDM ಎಂಜಿನಿಯರಿಂಗ್ ಕಾಲೇಜ್ KLE ಮುಂತಾದವುಗಳಲ್ಲಿ ಹೋಗಿ, ನೀವು ಬಹಳ ಹಳೇವು ಅನ್ನಿಸಿಕೊಳ್ಳದಿದ್ರೆ, ಚೆನ್ನಾಗಿ ಎನ್ಜಾಯ್ ಮಾಡಬಹುದು!

ಗಮನಿಸಿ: ಎಲ್ಲಾ ಜಾಗಗಳಲ್ಲೂ ಸಮಯದ ನಿರ್ಬಂಧಗಳನ್ನು ಗಮನಿಸಿ ಮತ್ತು ಸ್ಥಳೀಯ ನಿಯಮಗಳನ್ನು ಪಾಲಿಸಿ. ನಿಮ್ಮ ಹ್ಯಾಪಿ ಎಂಡಿಂಗ್ ನಿಶ್ಚಿತ!